Error
  • The template for this display is not available. Please contact a Site administrator.

ದಾವಣಗೆರೆ ಜಿಲ್ಲಾ ಪಂಚಮಸಾಲಿ ಯುವ ಘಟಕದ ಅಧ್ಯಕ್ಷರಿಂದ ಬಡ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ವಿತರಣೆ.

ದಾವಣಗೆರೆ ಜಿಲ್ಲಾ ಪಂಚಮಸಾಲಿ ಯುವ ಘಟಕದ ಜಿಲ್ಲಾ ಅಧ್ಯಕ್ಷರಾದ ಶ್ರೀ ಕೆ ಶಿವಕುಮಾರ್ (ರಾಜು) ಇವರ ಕಾರ್ಯಕ್ಷಮತೆ ವಿಶಿಷ್ಟ. ಅವರ ಕಣ್ಣಿಗೆ ಮೊದಲು ಗೋಚರಿಸಿದ್ದೆ ಆರ್ಥಿಕವಾಗಿ ಹಿಂದುಳಿದ ಶಾಲಾ ಬಡ ವಿದ್ಯಾರ್ಥಿಗಳು. ದಿನಾಂಕ 20 ಜೂನ್ 2022 ರ ಸೋಮವಾರ, ಅಧ್ಯಕ್ಷರಾಗಿ ಆಯ್ಕೆಯಾದ ಎರಡನೇ ದಿನವೇ ಶಿಕ್ಷಣದಿಂದಲೇ ತಮ್ಮ ಸಮಾಜಸೇವೆಯನ್ನು ಶುಭಾರಂಭ ಮಾಡಬೇಕೆಂದು ಸುಮಾರು 56 ವಿದ್ಯಾರ್ಥಿಗಳಿಗೆ ಒಂದು ವರ್ಷಕ್ಕೆ ಬೇಕಾಗುವಷ್ಟು ಶಿಕ್ಷಣಕ್ಕೆ ಅತಿ ಅವಶ್ಯಕವಾದ ನೋಟ್ ಪುಸ್ತಕಗಳನ್ನು ವಿತರಿಸಿದರು. ಈ ಕಾರ್ಯವನ್ನು ಅವರು ಹಿಂದೆಯೂ ಸುಮಾರು ವರ್ಷಗಳಿಂದ ಸದ್ದಿಲ್ಲದೆ ಮಾಡುತ್ತಾ ಬಂದಿದ್ದಾರೆ. ಅವರ ಈ ಕಾರ್ಯವು ಅತ್ಯಂತ ಶ್ಲಾಘನೀಯ, ಭಗವಂತನು ಅವರಿಗೆ ಮುಂದೆಯೂ ಇನ್ನೂ ಹೆಚ್ಚಿನ ರೀತಿಯಲ್ಲಿ ಸಮಾಜ ಸೇವೆಯನ್ನು ಮಾಡಲು ಅವಕಾಶವನ್ನು ಕೊಡಬೇಕೆಂದು ಆ ಭಗವಂತನಲ್ಲಿ ವಿನಂತಿಸಿಕೊಳ್ಳುತ್ತಿದ್ದೇವೆ.

ಈ ಸಂದರ್ಭದಲ್ಲಿ ಅವರೊಂದಿಗೆ ಜಿಲ್ಲಾ ಯುವ ಘಟಕದ ಪ್ರಧಾನ ಕಾರ್ಯದರ್ಶಿ ಕುಮಾರ್ ಹುಂಬಿ, ಸಂಘಟನಾ ಕಾರ್ಯದರ್ಶಿ ಹೊಸಕೇರಿ ಶಿವಕುಮಾರ್, ಬೆಳವನೂರು ನಾಗರಾಜ್, ನಗರ ಯುವ ಘಟಕದ ಅಧ್ಯಕ್ಷರಾದ ಅಂಗಡಿ ಸ್ವರೂಪ್, ಉಪಾಧ್ಯಕ್ಷರಾದ ನವೀನ್ ಎಂ ಎಸ್, ಕಾರ್ಯಾಧ್ಯಕ್ಷರಾದ ಚಂದನ ಪಲ್ಲಗಟ್ಟಿ, ಗ್ರಾಮಸ್ಥರಾದ ಗಣೇಶ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.